"ಸ್ವಸ್ಥ ಆಚಾರ್ಯರು" 

ಪೂಜ್ಯ ಆಚಾರ್ಯರೇ, 

"ಡಿಜಿಟಲ್ ವ್ಯಾಸಪೀಠ" ವತಿಯಿಂದ ನಿಮಗೆ, ನಿಮ್ಮ ಅಂತರ್ಯಾಮಿ ಹರಿವಾಯು ಗುರುಗಳಲ್ಲಿ ನಮ್ಮ ಅನಂತ ನಮಸ್ಕಾರಗಳು. ನಿಮಗೆ ತಿಳಿದಿರುವಂತೆ, ನಮ್ಮ "ಸ್ವಸ್ಥ ಆಚಾರ್ಯರು" ಕೌಟುಂಬಿಕ ಆರೋಗ್ಯ ವಿಮಾ ಕಾರ್ಯಕ್ರಮದ ಪ್ರಾರಂಭಿಕ ಹಂತದಲ್ಲಿದ್ದೇವೆ. 

ಸಮಸ್ತ ಮಾಧ್ವ ಪಂಡಿತವರ್ಗದ ಕುಟುಂಬಗಳಿಗೆ, 5 ಲಕ್ಷ ಮೊತ್ತದ (Family Floater) ಕುಟುಂಬ ಆರೋಗ್ಯ ವಿಮೆಯನ್ನು ಖರೀದಿಸುವುದು ನಮ್ಮ ಸಂಸ್ಥೆಯ ಉದ್ದೇಶ. ನಮ್ಮ ಈ ಸದುದ್ದೇಶಕ್ಕೆ "ಹರಿದಾಸ ಚಂದ್ರಿಕಾ" ಸಂಸ್ಥೆಯವರೂ ಕೈಜೋಡಿಸಿದ್ದಾರೆ. 

ಸಂದರ್ಭೋಚಿತವಾಗಿ ಒದಗಿರುವ ಕೊರೋನಾ ಕಷ್ಟವನ್ನು ಪರಿಗಣಿಸಿ, ತಕ್ಷಣದಲ್ಲಿ ಎಲ್ಲ ಆಚಾರ್ಯರ ಕುಟುಂಬಕ್ಕೆ "ಕೋವಿಡ್ ಕವಚ" ಎಂಬ ಕುಟುಂಬ ಆರೋಗ್ಯವಿಮಾವನ್ನು ಒದಗಿಸುವ ನಿರ್ಧಾರವನ್ನು "ಡಿಜಿಟಲ್ ವ್ಯಾಸಪೀಠ" ಹಾಗೂ "ಹರಿದಾಸ ಚಂದ್ರಿಕಾ" ಸಂಸ್ಥೆಯ ಸಹಯೋಗದಲ್ಲಿ ನಿರ್ಧಾರ ಮಾಡಿದ್ದೇವೆ. 

ಸಾಧಾರಣ 4 ಮಂದಿಯಿರುವ ಕುಟುಂಬದ "ಕೋವಿಡ್ ಕವಚ" ವಿಮೆಗೆ, ಅಂದಾಜು 18 ಸಾವಿರ ರೂಪಾಯಿ ವ್ಯಚ್ಛವಾಗುತ್ತದೆ. 

ವಿಮಾ ಮೊತ್ತ ಬಹಳವಾದ ಕಾರಣ ಹಾಗೂ ಅನೇಕ ಬ್ರಾಹ್ಮಣರಿಗೆ ಈ ಯೋಜನೆಯಿಂದ ಉಪಯೋಗವಾಗಬೇಕಿರುವ ಕಾರಣ, ನಾವು ಈ ಕೆಳಗಿನ ಅರಿಕೆಯನ್ನು ವಿನಮ್ರವಾಗಿ, ಭಕ್ತಿಪೂರ್ವಕವಾಗಿ ನಿಮ್ಮಲ್ಲಿ ಮಾಡಿಕೊಂಡಿದ್ದೇವೆ ಮತ್ತು ನಿಮ್ಮ ಪ್ರೀತಿಯ ಸಹಕಾರ ಬೇಡುತ್ತಿದ್ದೇವೆ. 

ನಿಮ್ಮಲ್ಲಿ ನಮ್ಮ ಅರಿಕೆಯೇನೆಂದರೆ, ನಿಮ್ಮ ವಿಮಾ ಖರೀದಿಗೆ ನೀವು ನಿಮ್ಮ ಕೈಲಾದ ಬಾಪ್ತನ್ನು ನಮಗೆ ಕಳುಹಿಸಿಕೊಟ್ಟರೆ, ಉಳಿದ ಮೊತ್ತವನ್ನು ನಮ್ಮ ಸಂಸ್ಥೆಯ ವತಿಯಿಂದ ಸೇರಿಸಿ, ವಿಮಾ ಖರೀದಿಯನ್ನು ಮಾಡಿ, ನಿಮಗೆ ವಿಮೆಯನ್ನು ತಲುಪಿಸುತ್ತೇವೆ. 

ಇದು ಖಂಡಿತ ಕಡ್ಡಾಯವಲ್ಲ 

ಬ್ರಾಹ್ಮಣರಿಂದ ಏನನ್ನೂ ನಿರೀಕ್ಷೆ ಮಾಡದೆ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕೆಂದಿರುವ ನಮಗೆ, ಸಮೀಪದ ಭವಿಷ್ಯತ್ತಿನಲ್ಲಿಯೇ, ಕುಟುಂಬ ವಿಮೆಯನ್ನು ಎಲ್ಲ ವೈದಿಕ ಬ್ರಾಹ್ಮಣರಿಗೆ, ವೈದಿಕರ ಧನದ ನಿರಪೇಕ್ಷಿತವಾಗಿ ತಲುಪಿಸುವಂತೆ ಹರಿವಾಯು ಗುರುಗಳಲ್ಲಿ ಪ್ರಾರ್ಥಿಸಿ, ನಮ್ಮನ್ನು ಆಶೀರ್ವದಿಸಿ. 

ನಿಮ್ಮ ವಿಶೇಷವಾದ ಅಭಿಪ್ರಾಯಗಳನ್ನು ನಮಗೆ ಸಂಕೋಚವಿಲ್ಲದೆ, ತಪ್ಪದೆ ತಿಳಿಸಿ. 

ಶಿರಸ್ಸಾಷ್ಟಾಂಗ ಪ್ರಣಾಮಗಳೊಂದಿಗೆ, 

ಬ್ರಾಹ್ಮಣ ವಿಧೇಯ, 
ಡಿಜಿಟಲ್ ವ್ಯಾಸಪೀಠ (ದಿವ್ಯಾ)  

ರವಿ ನಾರಾಯಣ್,  
ಜಾಯಿಂಟ್ ಸೆಕರೇಟರಿ, 
ಮಾಧ್ವ ಸಂಘ ಬಸವೇಶ್ವರನಗರ, 
ಬೆಂಗಳೂರು 
+91 9845132086  

ನೋಟ್: ಮಿಕ್ಕ ವಿಮಾ ವಿವರಗಳಿಗಾಗಿ ರವಿ ಅವರನ್ನು ಸಂಪರ್ಕಿಸುವುದು

Tips to avoid COVID spread: COVID Information 

Link to donation page: COVID Donation