Feedback from Beneficiaries
Feedback 1 :
ಹರೇ ನಮಃ. ನಾನು ಪ್ರಹ್ಲಾದ್ ಜೋಷಿ. ಉತ್ತರಾಧಿ ಮಠದಲ್ಲಿ ಹಿರಿಯ ಪ್ರಾಧ್ಯಾಪಕ. ನಾವು ನಮ್ಮ ಸಂಸಾರಕ್ಕೆ ಹರಿದಾಸ ಚಂದ್ರಿಕಾ ಸೇವಾ ಸಂಸ್ಥೆಯಿಂದ ದಾನಿಗಳ ಮೂಲಕ
೨೦೨೨ ಇಸವಿಯಲ್ಲಿ ಅರೋಗ್ಯ ವಿಮೆ ಮಾಡಿಸಿದ್ದೇವೆ. ನಮ್ಮ ಧರ್ಮ ಪತ್ನಿಯವರು ಬೆನ್ನು ನೋವಿನ ಸಮಸ್ಯೆ ಆಗಿ ಅಡ್ಮಿಶನ್ ಮಾಡಿ ಆಪರೇಷನ್ ಆಯಿತು ೨೦೨೩ ಫೆಬ್ರವರಿ ತಿಂಗಳಲ್ಲಿ.
ಈಗ ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಅನುಭವ ಮತ್ತು ನಮಗೆ ತಿಳಿದುಕೊಳ್ಳುವ ಒಂದು ಸಂಗತಿ ಇದೆ ಈ ವಿಮೆಯಲ್ಲಿ. ಸರ್ಜರಿ ಸಂಬಂಧ ಪಟ್ಟ ಹಾಗೆ, ಆಕ್ಸಿಡೆಂಟ್ ಹೊರತುಪಡಿಸಿ, ಉಳಿದ ಶಸ್ತ್ರ ಚಿಕಿತ್ಸೆಗಳಿಗೆ ೨ ವರ್ಷಗಳ ಕಾಲ ವೈಟಿಂಗ್ ಪಿರಿಯಡ್ ಇರುತ್ತದೆ. ಇದು ಒಂದು ಓಪನ್ ಪೋಲೀಸಿಯಲ್ಲ.
ಆದ್ದರಿಂದ ನಾವು ಈ ವಿಮೆ ಪ್ರಾಡಕ್ಟ್ ನಾ ಒಮ್ಮೆ ಕಂಡಿಷನ್ಸ್ ಓದಿ ತಿಳಿದುಕೊಳ್ಳ ಬೇಕು. ಹೆಚ್ಚಿನ ಮಾಹಿತಿಗಾಗಿ ಇನ್ಶೂರೆನ್ಸ್ ಕನ್ಸಲ್ಟೆಂಟ್ ಕೃಷ್ಣ ಗೌಡ ಅವರು ಲಭ್ಯ ರಿದ್ದಾರೆ.
ಈ ಕ್ಷೇತ್ರದಲ್ಲಿ ಅವರು ಫೆಲೋಶಿಪ್ ಪಡೆದಿರುತ್ತಾರೆ. ೩೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಪಾಲಿಸಿ ಮಾಡಿಸಿ ಮತ್ತು ಅವರ ಕ್ಲೈಮ್ಸ್ ಗೆ ಸಹಾಯ ಮಾಡುತ್ತಿದ್ದಾರೆ.
ಉತ್ತರಾಧಿ ಮಠದಿಂದ ೧೫ ಪ್ರಾಧ್ಯಾಪಕ ಕುಟುಂಬಗಳಿಗೆ ಈ ಅರೋಗ್ಯ ವಿಮೆ ಮಾಡಿಸಿದ್ದೇವೆ. ನೀವು ಕೂಡ ಮಾಡಿಸಿಕೊಳ್ಳುವುದು ಉತ್ತಮ. ಧನ್ಯವಾದಃ
Feedback 2 :
ನಮಸ್ತೆ, ನಾನು ಬದನಾರಾಯಣಾಚಾರ್ಯ. ೩ ವರ್ಷಗಳ ಹಿಂದೆ ಹರಿದಾಸ ಚಂದ್ರಿಕಾ ಸಂಸ್ಥೆ ಕಡೆಯಿಂದ ನಾನು ಕೂಡ ನನ್ನ ಸಂಸಾರಕ್ಕೆ ಹೆಲ್ತ್ ಇನ್ಶೂರೆನ್ಸ್ ಮಾಡಿಸಿದ್ದೆವು.
ನಮ್ಮ ವಾಸ ಶ್ರೀರಂಗ ಪಟ್ಟಣ. ನಮ್ಮ ಮಗಳು ಪಾಲಿಸಿ ಮಾಡಿಸಿದ ಮೊದಲ ವರ್ಷದಲ್ಲೇ ಹುಷಾರು ತಪ್ಪಿದಳು. ನಾವು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದೆವು.
ಈ ಸಮಯದಲ್ಲಿ ನಮಗೆ ಹೆಲ್ತ್ ಇನ್ಶೂರೆನ್ಸ್ ಪ್ರೋಸೆಸ್ ಆಗಿ, ನಮಗೆ ಅರ್ಹತೆ ಇರುವ ಮಟ್ಟಕ್ಕೆ ಹಣ ಕ್ಲೇಮ್ ಆಗಿ ಪಾಲಿಸಿ ಮೂಲಕ ಪೇಮೆಂಟ್ ಆಯಿತು. ನಮಸ್ತೆ ಸದ್ಯಕ್ಕೆ ೩ ಲಕ್ಷ
ವರ್ಷಕ್ಕೆ ಕ್ಲೇಮ್ ಮಾಡುವಷ್ಟು ವ್ಯವಸ್ಥೆ ಈ ಹೆಲ್ತ್ ಪಾಲಿಸಿ ನಲ್ಲಿ ಇದೆ. ಪಾವತಿಯ ಮೊತ್ತವು ಆಸ್ಪತ್ರೆಯ ಕೊಠಡಿ ಬಾಡಿಗೆಯನ್ನು ಅವಲಂಬಿಸಿರುತ್ತದೆ.
ಹೆಚ್ಚಿನ ವಿವರಗಳನ್ನು ಇನ್ಶೂರೆನ್ಸ್ ಪರಿಣಿತ ಕೃಷ್ಣ ಗೌಡರ ಮೂಲಕ ಮಾಹಿತಿ ತೆಗೆದು ಕೊಳ್ಳಬಹುದು. ಅವರು ಫೆಲೋಶಿಪ್ ಇನ್ ಜನರಲ್ ಇನ್ಶೂರೆನ್ಸ್.
ವರ್ಷಕ್ಕೆ ನಮ್ಮ ಫ್ಯಾಮಿಲಿ ಗೆ ನಾನು ನನ್ನ ಹೆಂಡತಿ ಮತ್ತು ೩ ಮಕ್ಕಳು ಸೇರಿ ವರ್ಷಕ್ಕೆ ೧೬,೦೦೦ ಪ್ರೀಮಿಯಂ ಬರುತ್ತದೆ.
ದಾನಿಗಳಿಂದ, ಶಿಷ್ಯವೃಂದದಿಂದ ಮತ್ತು ನಾವು ಕೂಡ ಅಲ್ಪ ಕಾಣಿಕೆ ಮುಖಂತಾರ ಈ ಒಂದು ನ್ಯಾಷನಲ್ ಇನ್ಶೂರೆನ್ಸ್ ನ್ಯೂ ಪರಿವರ್ ಪಾಲಿಸಿ ಮಾಡಿಸುವುದು ಉತ್ತಮ.
ನಾವು ಆಸ್ಪತ್ರ್ರೆಗೆ ಹೋಗುವ ಸಂದರ್ಭ ಬರುವುದು ಬೇಡ. ಆದರೆ ಆರೋಗ್ಯ ವಿಮೆ ಮಾಡಿಸಿ ಇಟ್ಟುಕೊಳ್ಳುವುದು ಉತ್ತಮ. ನಮಗೆ ಅಥವಾ ಇನ್ನೊಬ್ಬ ವಿಮೆದಾರರಿಗೆ ಹಾಸ್ಪಿಟಲ್ ಅಡ್ಮಿಶನ್ ಸಮಯದಲ್ಲಿ ಸಹಾಯಕ್ಕೆ ಬರುತ್ತದೆ.